ಜ ಗತ್ತಿನಲ್ಲಿ ದೊಡ್ದದಾದ ಹಿಂದೂ ದೇವಾಲಯವಿದು, ಆದರೆ ಭಾರತದಲ್ಲಿ ಇಲ್ಲ !!!
ಅದಕ್ಕೇ ಕೆಲವರಿಗೆ ಇದು ಭಾರತದಲ್ಲಿ ಬೇಕಾಗಿದೆ......ಆದರೆ ಇದು ಎಷ್ಟು ಸರಿ? ....
ಅಂಕುರ್ ವಾಟ್ ದೇವಾಲಯ (ಕಾಂಬೋಡಿಯ)
ಈ ದೇವಾಲಯ ಜಗತ್ತಿನ ದೊಡ್ಡ ಹಿಂದೂ ದೇವಾಲಯ ಅಷ್ಟೇ ಅಲ್ಲ ಅದ್ಭುತವಾದ ದೇವಾಲಯ . ವಿಷಾದದ ಸಂಗತಿ ಅಂದರೆ ತುಂಬ ಜನರಿಗೆ(ಹಿಂದೂ ಗಳಿಗೆ ) ಇದು ಗೊತ್ತಿಲ್ಲ. ಇದು ಜಗತ್ತಿನ ಪಾರಂಪರಿಕ ಕಟ್ಟಡವಾಗಿ ಸ್ಥಾನ ಪಡೆದು ಕೊಂಡಿದೆ. ಈ ದೇವಾಲಯ ಕಾಂಬೋಡಿಯದ ಅಂಕೋರ್ ಹೆಸರಿನ ಊರಿನಲ್ಲಿದೆ. ಇ ದು 12 ನೇ ಶತಮಾನದಲ್ಲಿ ರಾಜ ಸೂರ್ಯವರ್ಮನ್ 2 ನಿಂದ ಅವನ ರಾಜಧಾನಿ ಯಲ್ಲಿ ಅರಮನೆಯ ದೇವಾಲಯವಾಗಿ ಕಟ್ಟಲ್ಪಟ್ಟಿತು.
ಇಂದಿಗೂ ಸುಸ್ತಿತಿಯಲ್ಲಿ ಇರುವ ಈ ದೇವಾಲಯ ಮೊದಲು ಹಿಂದೂ ದೇವಾಲಯವಾಗಿ ನಂತರ ಬೌದ್ದ ಧರ್ಮ ದ ದೇವಾಲಯವಾಯಿತು.(ರಾಜನು ಬೌದ್ದ ಧರ್ಮಕ್ಕೆ ಮತಾಂತರ ಗೊಂಡಾಗ .....).ಇದು ಈಗ ಕಾಂಬೋಡಿಯ ದ ರಾಷ್ಟ್ರೀಯ ಹೆಮ್ಮೆಯಾಗಿದೆ ಮತ್ತು ರಾಷ್ಟ್ರ ಬಾವುಟ ದಲ್ಲೂ ಸ್ಥಾನ ಪಡೆದಿದೆ.
ದೇವಾಲಯದ ಇತಿಹಾಸ :
ಇ ದು 12 ನೇ ಶತಮಾನದ ಮೊದಲ ಭಾಗದಲ್ಲಿರಾಜ ಸೂರ್ಯವರ್ಮನ್- 2 (1113-1150) ನಿಂದ ಅವನ ರಾಜಧಾನಿ ಯಲ್ಲಿ ಅರಮನೆಯ ದೇವಾಲಯವಾಗಿ ಕಟ್ಟಲ್ಪಟ್ಟಿತು. ಮಹಾ ವಿಷ್ಣುವಿಗಾಗಿ ಕಟ್ಟಿಸಲ್ಪಟ್ಟ ಈ ದೇವಾಲಯದ ಮತ್ತು ಉತ್ತರದಭಾಗ ದ ದ್ವಾರದ ನಡುವೆ ಅರಮನೆ ಇತ್ತು. 14 ಅಥವಾ 15 ನೆ ಶತಮಾನದಲ್ಲಿ ಇದು ಬೌದ್ದ ದೇವಾಲಯವಾಗಿ ಪರಿವರ್ತನೆಯಾಗಿ ಇಂದಿಗೂ ಹಾಗೆ ಉಳಿದಿದೆ. ಈಗ ಇದನ್ನು ಸಿಟಿ ಟೆಂಪಲ್ (ನಗರ ದೇವಾಲಯ) ಎನ್ನುತ್ತಾರೆ.
ಜಗತ್ತಿನ ದೊಡ್ಡ ಹಿಂದೂ ದೇವಾಲಯ ಯಾಕೆ ಭಾರತದಲ್ಲಿ ಇಲ್ಲ? ಇದು ಕೆಲವರ ಚಿಂತೆ !!!!
ಕೆಲವರು ಭಾರತದಲ್ಲಿ ಅಂಕೋರ ವಾಟ್ ದೇವಾಲಯದ ತರಹದ ಇನ್ನೊಂದು ದೇವಾಲಯ (ಮೂಲಕ್ಕಿಂತ ದೊಡ್ಡದಾದ ) ಸ್ತಾಪಿಸಲು ಅಣಿಯಾಗುತ್ತಿದ್ದಾರೆ. ಇದು ರಾಜತಾಂತ್ರಿಕ ಬಿಕ್ಕಟ್ಟು ತರುವಂತೆ ಕಾಣುತ್ತಿದೆ. ಈ ದೇವಾಲಯ ಕಾಂಬೋಡಿಯ ದವರಿಗೆ ರಾಷ್ಟೀಯ ಹೆಮ್ಮೆ ಮತ್ತು ಪ್ರವಾಸೋದ್ಯಮದ ಲ್ಲಿ ಪ್ರಮುಖ ಆಕರ್ಷಣೆಯಾಗಿದೆ . ಅಲ್ಲಿಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತ ಗಂಗಾ ನದಿಯ ದಡದಲ್ಲಿ ಕಟ್ಟಲಾಗುವ ಇನ್ನೊಂದು ಅಂಕೋರ ವಾಟ್ ದೇವಾಲಯದ ಮಾದರಿಯು ಅವಮಾನಕರ ಎಂದು ಬಣ್ಣಿಸಿದೆ ಮತ್ತು ಇದು ಪರಸ್ಪರ ಸಂಬಂಧ ದ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಿದೆ . " ನಿಮ್ಮ ಜಗತ್ಪ್ರಸಿದ್ದ ತಾಜ್ಮಹಲನ್ನು ಯಾರದರೂ ನಕಲನ್ನು ಕಟ್ಟಿಸಿದರೆ ನಿಮಗೆ ಹೇಗಾಗಬಹುದು " ಎನ್ನುವ ಪ್ರಶ್ನೆ ಯನ್ನು ಅವರು ಕೇಳುತ್ತಿದ್ದಾರೆ .
ಭಾರತದಲ್ಲಿ ಎಲ್ಲಿ (ಮತ್ತು ಯಾರು ):
ಭಾರತದಲ್ಲಿ ಇದ ನ್ನು " ವಿರಾಟ್ ಅನ್ಕೊರ್ ರಾಮ್ ಮಂದಿರ " ಅನ್ನೋ ಹೆಸರಿನಿಂದ ಕರೆಯಲಾಗುವದು ಎನ್ನಲಾಗಿದೆ. ಇದನ್ನು ಬಿಹಾರದ ಇಸ್ಮೈಲಪುರ ಎನ್ನುವ ಊರಿನ ಹಾಜಿಪುರ -ಬಿದುಪುರ ರಸ್ತೆಯ 6 ಹೆಕ್ಟೇರ ಭೂಮಿಯಲ್ಲಿ ಸ್ತಾಪಿಸಲಾಗುವದು. 1000 ದಷ ಲಕ್ಷ ದ ಅಂದಾಜು ವೆಚ್ಚದ ಈ ದೇವಾಲಯ ಬರುವ ಪ್ರದೇಶವನ್ನು " ಅಂಕುರ ನಗರ " ಎನ್ನಲಾಗುವದು. ಕಟ್ಟಲು ಸುಮಾರು 10 ವರ್ಷ ಬೇಕಾಗಬಹುದು ಎನ್ನಲಾಗುವ ಈ ದೇವಾಲಯವನ್ನು " ದಿ ಬಿಹಾರ ಮಹಾವೀರ ಮಂದಿರ ಟ್ರಸ್ಟ್ " ಎನ್ನುವವರು ಕಟ್ಟಿಸುತ್ತಿದ್ದಾರೆ.
ಮೂಲ ದೇವಾಲಯ ಕ್ಕಿಂತ ಎತ್ತರವಾಗಿ ಭಾರತದಲ್ಲಿ ಕಟ್ಟಲಾಗುವ (86 ಮೀಟರ್) ಈ ದೇವಾಲಯ, 5 ಅಂತಸ್ತು ಗಳು ಹಾಗು 5 ಶಿಖರ ಗಳನ್ನೂ (ಮೂಲ ದೇವಾಲಯ ದಂತೆ ) ಹೊಂದಲಿದೆ .

ಭಾರತದಲ್ಲಿ ಎಷ್ಟೋ ಜನಕ್ಕೆ ತಲೆಯ ಮೇಲೆ ಸೂರೇ ಇಲ್ಲ.ಭಾರತದ ಅರ್ಧದಷ್ಟು ಮಕ್ಕಳು ಹೊಟ್ಟೆತುಂಬಾ ಊಟಸಿಗದೇ ಅಪೌಷ್ಟಿಕತೆಗೆ ಒಳಗಾಗಿದ್ದಾರೆ.
ಪ್ರತ್ಯುತ್ತರಅಳಿಸಿದೇವರು,ದೇವಸ್ಥಾನಗಳು ನಮ್ಮ ಹೆಮ್ಮೆಯ ಸಂಕೇತಗಳಾಗಿ ಉಳಿದಿಲ್ಲ.ನಮ್ಮ ಶಾಲೆಗಳು ಹೇಗಿವೆ? ನಮ್ಮ ರೈತರಿಗೆ ಬೆಳೆ ಸಂಗ್ರಾಹಾಗಾರಗಳಿವೆಯೇ? ಹಳ್ಳಿಗಳಿಗೆ ನಿರಂತರ ವಿದ್ಯುತ್ ಸೌಕರ್ಯ ನೀಡಲು ಸಾಧ್ಯವೇ? ಮುಂತಾದ ಪ್ರಶ್ನೆಗಳು ನಮ್ಮ ಎದುರಾಗಬೇಕಿವೆ.
ಎಲ್ಲರಿಗೂ ಮನೆಯಿದ್ದು,ಮನೆಗೊಂದು ಶೌಚಾಲಯವಿದ್ದರೆ ಅದು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಬಲ್ಲದು.