ಮಂಗಳಯಾನದ ಕೆಲವು ಹೆಮ್ಮೆಗಳು...ಕೆಲವು ನಿರಾಸೆಗಳು..




ಮಂಗಳಯಾನದ  ಕೆಲವು ಹೆಮ್ಮೆಗಳು...


1. ಈ ಮಂಗಳಯಾನದ ಖರ್ಚು (450 ಕೋಟಿ ರೂ ಗಳು -  71 ಮಿಲಿಯನ್ ಡಾಲರಗಳು) ಎಷ್ಟು ಕಡಿಮೆ ಎಂದರೆ ಇಂಗ್ಲಿಶ್ ಚಲನಚಿತ್ರ "ಗ್ರಾವಿಟಿ" ಗೆ ಇದಕ್ಕಿಂತ ಹೆಚ್ಹು ಖರ್ಚು (100 ಮಿಲಿಯನ್ ಡಾಲರಗಳು) ತಗುಲಿದೆ.
ಹಾಗೆ ಮೊನ್ನೆ ಭಾನುವಾರ ಮಂಗಳನ ಅಂಗಳಕ್ಕೆ ಇಳಿದ ಅಮೆರಿಕದ "ಮಾವೆನ್" ಗೆ 670 ಮಿಲಿಯನ್ ಡಾಲರಗಳು ಖರ್ಚಾಗಿವೆ. ಇನ್ನೊಂದು  ವಿಷಯ ಎನೆಂದರೆ ಇಸ್ರೋ ದ ವಾರ್ಷಿಕ ಬಜೆಟ್ ಕೇವಲ 1 ಬಿಲಿಯನ್ ಡಾಲರಗಳಾದರೆ, ಆಮೆರಿಕದ್ದು 17.7 ಬಿಲಿಯನ್ ಡಾಲರ್ ಮತ್ತೆ ಚೈನಾದ್ದು 2.5 ಬಿಲಿಯನ್ ಡಾಲರ್ ಆಗಿದೆ.

2. ಜಗತ್ತಿನ ಎಲ್ಲ ದೇಶಗಳ 51 ಮಂಗಳಯಾನ ಗಳಲ್ಲಿ ಕೇವಲ 21 ಮಾತ್ರ ಯಶಸ್ವಿಯಾಗಿದೆ. ಜಪಾನ ಮತ್ತು ಚೈನಾ ಇನ್ನೂ ಒಂದು ಸಲವೂ ಯಶಸ್ವಿಯಾಗಿಲ್ಲ. ಮಾತ್ರವಲ್ಲ ಮೊದಲ ಯತ್ನದಲ್ಲಿಯೆ ಯಶಸ್ವಿಯಾಗಿದ್ದು ಭಾರತ ಮಾತ್ರ.

3. ಇಸ್ರೂ ಈ ಮಂಗಳಯಾನದ ತಯಾರಿಕೆಗೆ ತೆಗೆದುಕೊಂಡ ಸಮಯ ಕೇವಲ 15 ತಿಂಗಳು ಮಾತ್ರ. ಆದರೆ ಬೇರೆ ದೇಶಗಳು 36 ರಿಂದ 48 ತಿಂಗಳು ತೆಗೆದುಕೊಂಡಿವೆ. ಇದು ಪಿ ಎಸ್ ಎಲ್ ವಿ ರಾಕೆಟ್ ಮೊದಲೇ ತಯಾರಾಗಿ ಇಟ್ಟಿರುವದರಿಂದ ಸಾದ್ಯವಾಗಿದೆ.

4.  ಇಂದಿನ ಕೊನೆಯ ಘಟ್ಟ ತುಂಬ ಪ್ರಾಮುಖ್ಯತೆ ಪಡೆದಿತ್ತು.  ನೌಕೆಯ ವೇಗ 22.1 km/s ರಿಂದ 4.4 km/s ಗೆ ಇಳಿಸಬೇಕಿತ್ತು. ಇಲ್ಲವಾದರೆ ನೌಕೆ  22.1 km/s ವೇಗದಲ್ಲಿ ಸಾಗಿ ಮಂಗಳನ ಕಕ್ಷೆಯಿಂದ ಆಚೆ ಹೋಗುವ ಅಪಾಯವಿತ್ತು.


ಮಂಗಳಯಾನದ  ಕೆಲವು ನಿರಾಸೆಗಳು..


1.  ನಮ್ಮ ಮಂಗಳಯಾನ ನೌಕೆ 1350 ಕಿ ಗ್ರಾಂ ಭಾರ ಇದ್ದರೂ ನಿಜವಾದ ಸಲಕರಣೆಗಳ ಭಾರ ಕೇವಲ 13 ಕಿ ಗ್ರಾಂ ಮಾತ್ರ. ಬೇರ ನೌಕೆಗಳಲ್ಲಿ  ಇದರ ಸರಾಸರಿ ಭಾರ 100 kg ಇರುತ್ತದೆ.

2. ನಮ್ಮ ಯೋಜನೆಯ ಪ್ರಕಾರ ನೌಕೆ ನಿಗದಿತ ಕಕ್ಷೆಯಲ್ಲಿ ಸೇರಿದರೂ(366 km X 80,000 km), ಮಂಗಳನಿಂದ ಇದು ದೂರದ ಕಕ್ಷೆಯಾಗಿದೆ. ಈ ದೂರದಿಂದ ಮಂಗಳನ ಮೇಲ್ಮೈಯನ್ನು  ಸೂಕ್ಷ್ಮವಾಗಿ ನೋಡಲಾಗುವ ಸಂಭವ ಕಡಿಮೆ.

3.ಈ ಮಂಗಳಯಾನಕ್ಕೆ ಇಸ್ರೊ ಪೂರ್ತಿಯಾಗಿ ಸ್ಪೈನ್, ಆಸ್ಟ್ರೇಲಿಯ ಮತ್ತು ಅಮೇರಿಕದಲ್ಲಿರುವ NASA ದ ಕೃತಕ ಉಪಗ್ರಹ ಮತ್ತು ಅಂಟೆನ್ನಾ ಗಳನ್ನೇ ಅವಲಂಬಿಸಿದೆ.

4. ಇಸ್ರೊ ಗೆ  ಇನ್ನೂ ಜಿ ಎಸ್ ಎಲ್ ವಿ ಉಪಯೋಗಿಸಿ ಉಡಾವಣೆ ಸಾದ್ಯವಾಗಿಲ್ಲ. ಇದರಿಂದ ಹೆಚ್ಹು ತೂಕದ ಉಪಗ್ರಹಗಳನ್ನು ಹಾರಿಬಿಡಬಹುದು

ಕಾಮೆಂಟ್‌ಗಳು