ಮಗನ ಮದುವೆ ಮಾಡಿ ಜೈಲು ಪಾಲಾದ ಜೈ(ಲ್)ಲಲಿತಾ ಕತೆಯು....(JAI(L)LALITHA , FROM MYSORE AGRAHAAR TO PARAPPANA AGRAHAARA

ಜೈ(ಲ್)ಲಲಿತಾ, ಮಗನ ಮದುವೆ ಮಾಡಿ ಜೈಲು ಪಾಲಾದ ಕತೆಯು....


1. 1948 ( ಈಗ 66 ವರ್ಷ್) ರಲ್ಲಿ ಮೇಲುಕೋಟೆಯಲ್ಲಿ(Mysore) ಜನನ. ಬೆಂಗಳೂರಿನಲ್ಲಿ ಹೈಸ್ಕೂಲ ವರೆಗೆ ಓದು(Bishop Cotton School- 11 ವರ್ಷ ವಯಸ್ಸು). ತಾಯಿ ಆಸ್ತಿಗಾಗಿ ಜಗಳವಾಡಿ ಚೆನ್ನೈ ಗೆ ಬಂದ ಮೇಲೆ ನಂತರ ಚನ್ನೈಯಲ್ಲಿ ಕಾಲೇಜು. (MGR  ಅವಳ ಇಂಗ್ಲೀಷ ಗಾಗಿಯೇಅವಳನ್ನು ಮೆಚ್ಹಿದ್ದು).

2. ಮೊದಲ ಬಾರಿ ಮುಖ್ಯಮಂತ್ರಿ ಪಟ್ಟ -1991 ರಿಂದ 96 ರವರೆಗೆ. ಈ ಅವದಿಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಈ ಅವಧಿಯಲ್ಲಿ ಜಯಾಗೆ ತನ್ನ ಸಾಕುಮಗನ ಮದುವೆ ವೈಭವೋಪೇತವಾಗಿ ಮಾಡುವ  ಹುಕಿ ಬಂತು-ಅಲ್ಲೇ ಅವಳು ಎಡವಿದ್ದು.

3. 1995 ರ ಸೆಪ್ಟೆಂಬರ್ ನಲ್ಲಿ ನಡೆದ ಆ ಮದುವೆ (2 ವಿಷಯದಲ್ಲಿ) ಗಿನ್ನೆಸೆ ದಾಖಲೆ ಬರೆಯಿತು.
  A. ಮದುವೆಯ ಮೆರವಣಿಗೆ 2 ಕಿ ಮಿ ದೂರದವರೆಗೆ ಸಾಗಿತ್ತು.
  B. 25,೦೦೦ ಜನರು ಸೇರಬಹುದಾದ 10 ಮದುವೆ ಹಾಲ್ ಗಳು ಬುಕ್ ಆಗಿದ್ದವು.
  C. 75,೦೦೦ ಚ ಅಡಿ ಗಳ ವಿಶಾಲ ಪೆಂಡಾಲ್ ಹಾಕಲಾಗಿತ್ತು.
  D. ಡೈಮಂಡ್ ಹಾಗೂ ಬಂಗಾರ ಹಾಕಿಕೊಂಡು ಜಯಾ ಮತ್ತು ಸಸಿಕಲಾ ಮೆರೆದದ್ದೇ ದೊಡ್ಡ ಸುದ್ದಿಯಾಯ್ತು...

4. ಆಗ ಸುಬ್ರಮಣ್ಯ ಸ್ವಾಮಿ ಅಕ್ರಮ ಆಸ್ತಿ ಪ್ರಕರಣ ದೂರು ನೀಡಿದರು. ತನಿಖೆ ನಡೆಸಿದಾಗ ಒಟ್ಟು ಆಸ್ಥಿ 66.65 ಕೋಟಿ ಗೆ ಬಂದು ನಿಂತಿತು. ಈ ಮೊದಲು ಜಯಾ 1991 ಗಿಂತ ಮೊದಲಿನ ಆಸ್ತಿ 2 ಕೋಟಿ ಎಂದಿದ್ದಳು ಹಾಗೂ ತಾನು ಕೇವಲ 1 ರೂ ಸಂಬಳ ಪಡೆಯುತ್ತಿದ್ದೇನೆ ಎಂದಿದ್ದಳು.

5. ಆ ವರ್ಷ (1996) ರಲ್ಲಿ ನಡೆದ ಚುನಾವಣೆಯಲ್ಲಿ  ಜಯಲಲಿತಾ ಹೀನಾಯ ಸೋಲು ಅನುಭವಿಸಿದಳು.(ರಜನಿಕಾಂತ ಕೂಡ ಅವಳ ವಿರುದ್ಧ ಚುನಾವಣಾ ಭಾಷಣ ಮಾಡಿದ್ದರು).ಅವಳ ಭಾಷಣ ಕೇಳಲು ಕೇವಲ ಹೆಂಗಸರು ಮಾತ್ರ ಬರುತ್ತಿದ್ದರು ಅದೂ ಅವಳ ಸೀರೆ ಬಂಗಾರ ಮತ್ತು ಡೈಮಂಡ ಗಳ ಪ್ರದರ್ಶನ ನೋಡಲು ಮಾತ್ರ ಎನ್ನುವ ಮಾತು ಜನಜನಿತವಾಗಿತ್ತು. ತನ್ನ ಸೋಲಿನಿಂದ ಕಂಗೆಟ್ಟ ಅವಳು ಇನ್ನು ಮೇಲೆ ಬಂಗಾರ ಮತ್ತು ಡೈಮಂಡ್ ಗಳನ್ನು ಧರಿಸುವದಿಲ್ಲ ಎಂದು ಪಣತೊಟ್ಟಿದ್ದಳು.

6. ಅವಳ ಅಕ್ರಮ ಆಸ್ತಿಯ ವಿವರ ಹೀಗಿದೆ:
                 A. 1000 ಎಕ್ರೆ ಎಸ್ಟೇಟ್ ನೀಲಗಿರಿ ತಪ್ಪಲಲ್ಲಿ
                 B. 1000 ಎಕ್ರೆ ತಿರುನೆಲ್ವೇಲಿಯಲ್ಲಿ
                 C. 28 ಕೆ ಜಿ ಚಿನ್ನ(ಆಭರಣಗಳು)
 D. 12000 ಸೀರೆಗಳು (ಮತ್ತು ಚಪ್ಪಲಿಗಳು)
                 E. 5 ಕೋಟಿ, ಮದುವೆಗೆ ಖರ್ಚು ಮಾಡಿದ್ದು.
ಒಟ್ಟೂ ಮೊತ್ತ 66.65 ಕೋಟಿ ( ಅದು 18 ವರ್ಷ ಗಳ ಹಿಂದೆ...... ಈ..... ಗ... ಎಷ್ಟಾಗಿರಬಹುದು....)

7. ಅದಕ್ಕೆ ಅವಳಿಗೆ 100ಕೋಟಿ  ದಂಡ ವಿಧಿಸಲಾಗಿದೆ. (ನ್ಯಾಯಾಲಯ 100 ಕೋಟಿ ಯ ೨ ರಿಂದ ೩ ಪಟ್ಟು ದಂಡ ವಿಧಿಸಬಹುದಾಗಿದೆ). ಸಸಿಕಲಾ , ಇಳವರಸಿ  ಮತ್ತು ಸಾಕು ಮಗ ಈ ಮೂವರಿಗೆ ತಲಾ 10 ಕೋಟಿ ದಂಡ ವಿಧಿಸಲಾಗಿದೆ.

8.  ಈಗ ಈ  ಸಸಿಕಲಾ ಯಾರು ......? ನೋಡೋಣ.
ಸಸಿಕಲಾ 1982 ರಲ್ಲಿ ಜಯಾಗೆ ಪರಿಚಯವಾದಾಗ ವಿಡಿಯೋ ಪಾರ್ಲರ್ ನಡೆಸುತ್ತಿದ್ದಳು.
ಅವಳ ಗಂಡ (ನಟರಾಜನ್)ಒಬ್ಬ ಸಾಮಾನ್ಯ ಸರಕಾರಿ ನೌಕರನಾಗಿದ್ದ.( ಅವನು 2000 ರಲ್ಲಿ ಸ್ಕೂಟರ್ ಅಡ್ವಾನ್ಸಗಾಗಿ, ಕಾರ್ ಲೊನ್ ಗಾಗಿ, ಮನೆಗಾಗಿ ಸಾಲ ಮಾಡ್ತಾ ಒಡಾಡಿಕೊಂಡಿದ್ದ..)ಈಗ ಅವನ ಹೆಂಡತಿ 10 ಕೋಟಿ ದಂಡ ಕಟ್ಟುವಷ್ಟು ಬೆಳೆದಿದ್ದಾಳೆ. ಈ ಸಸಿಕಲಾ ಈ ತನ್ನ ಮನೆ ಬಿಟ್ಟು ಜಯಾ ಮನೆ ಸೇರಿಕೊಂಡದ್ದು ಮತ್ತೊಂದು ದೊಡ್ಡ ಕತೆ ಬಿಡಿ  ಆಮೇಲೆ   ಸಂಬಂಧಿ ಇಳವರಸಿ ಬಂದು ಸೇರಿದ್ದು ಇನ್ನೊಂದು ಕಹಾನಿ.

9. ಇಂತಿರ್ಪ ಜೈಲ್-ಲಲಿತಾ ಪರಪ್ಪನ ಅಗ್ರಹಾರದ 7402 ನಂಬ್ರ ದ ಕೋಣೆ ಸೇರಿದಮೇಲೆ ಈಗ ಪನ್ನೀರ ಸೆಲ್ವಂ ಹೆಸರು ಕೇಳಿ ಬರ್ತಾ ಇದೆ. ಅವನು ಹಿಂದೊಮ್ಮೆ ಅಮ್ಮ ಜೈಲ್-ಲಲಿತಾ ಆದಾಗ ಅವಳಿಗೆ  "ರಾಮನ ಭರತ" ನಾಗಿ ಒದಗಿದ್ದ. ಅವನು ಅಕ್ಷರಷ: ಅವಳ ಖಾಲಿ ಸಿ ಎಮ್  ಖುರ್ಚಿ  ಮೇಲೆ ಕೂಡ್ರದೆ  ಪಕ್ಕದ ಕುರ್ಚಿ ಮೇಲಿಂದ ರಾಜ್ಯಭಾರ ಮಾಡಿದ್ದ.





ಕಾಮೆಂಟ್‌ಗಳು