ಭಾರತರತ್ನ ಡಾ. ಅಬ್ದುಲ್ ಕಲಾಮ್ ರವರ ಬಗ್ಗೆ ಕೆಲವು ಜನಜನಿತ ಕತೆಗಳು
| ಡಾ. ಕಲಾಮ್ ರ ವಿದ್ಯಾರ್ಥಿಯಾಗಿದ್ದಾಗಿನ ಭಾವಚಿತ್ರ |
1. ಕಟ್ಟಡದ ರಕ್ಷಣಾತ್ಮಕ ಗೋಡೆಗೆ ಗ್ಲಾಸ್ ಹಾಕಿದ್ರೆ ಪಕ್ಷಿಗಳಿಗೆ ತೊಂದರೆಯಾಗಬಹುದು !
ಇದು ಅವರು ಡಿ ಅರ್ ಡಿ ಓ ನಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ಕಟ್ಟಡದ ರಕ್ಷಣೆಯ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದಾಗ ಕಲಾಮ ರವರು ಪಕ್ಷಿಗಳು ಗ್ಲಾಸನ್ನು ನೋಡಿ ಗೋಡೆ ಮೇಲೆ ಕುತ್ಕೊಳ್ಳೋದನ್ನೇ ಬಿಡಬಹುದು... ಅದೆಲ್ಲಾ ಬೇಡ ಬಿಡಿ ಅಂದುಬಿಟ್ಟರು ..!
2. ರಾಷ್ಟ್ರಪತಿಯಾದ ಮೇಲೆ ಕೇರಳದಲ್ಲಿ ರಾಷ್ಟ್ರಪತಿಗಳ ಅತಿಥಿಗಳಾಗಿ ಅವರು ಯಾರನ್ನು ಆಮಂತ್ರಿಸಿದ್ದರು.. ಊಹಿಸಬಲ್ಲಿರಾ?
ಅದು ಅವರು ರಾಷ್ಟ್ರಪತಿಯಾದ ಮೇಲೆ ಮೊದಲಸಲ ಕೇರಳಕ್ಕೆ ಭೇಟಿ ನೀಡಿದಾಗಿನ ಘಟನೆ. ರಾಷ್ಟ್ರಪತಿಗಳು ಯಾರನ್ನು ಬೇಕಾದರೂ ಅತಿಥಿಗಳಾಗಿ ಆಮಂತ್ರಿಸಬಹುದು. ಅವರು ಆಮಂತ್ರಿಸಿದ್ದು...೧). ಒಬ್ಬ ಚಮ್ಮಾರನನ್ನು ಮತ್ತು ೨). ಒಬ್ಬ ಸಣ್ಣ ಹೋಟೆಲ್ ನ ಮಾಲೀಕನನ್ನು.
ಇವರಿಬ್ಬರೂ ಹಿಂದೆ ವಿಜ್ನಾನಿಯಾಗಿ ತಿರುವನಂತಪುರಮ್ ನಲ್ಲಿ ಇದ್ದಾಗ ಪರಿಚಯವಾದ ಜನರಾಗಿದ್ದರು..!
3. ಅವರು ರಾಷ್ಟ್ರಪತಿಯಾದ ಮೇಲೆ ತಮ್ಮ ವೇತನ ಮತ್ತು ಜೀವಮಾನದ ಉಳಿತಾಯವನ್ನೆಲ್ಲ ಏನು ಮಾಡಿದರು ಗೊತ್ತೆ?
ಒಂದು ಸಲ ನೀವು ರಾಷ್ಟ್ರಪತಿಗಳಾದಿರೆಂದರೆ ನಿಮ್ಮ ಎಲ್ಲ ಖರ್ಚು ವೆಚ್ಚಗಳನ್ನು (ಮಾಜಿಗಳೂ ಸೇರಿ...) ಸರಕಾರವೇ ನೋಡಿಕೊಳ್ಳುತ್ತದೆ. ಇದು ಗೊತ್ತಿದ್ದ ಕಲಾಮ್ ರವರು ತಮ್ಮ ವೇತನ ಮತ್ತು ಜೀವಮಾನದ ಉಳಿತಾಯವನ್ನೆಲ್ಲ ಸೇರಿಸಿ ಒಂದು ಟ್ರಸ್ಟ ಮಾಡಿ- ಅದರ ಹೆಸರು ಪುರ( PURA) (Providing Urban Amenities to Rural Areas) , ಆ ಹಣವನ್ನು ಹಳ್ಳಿಗಳ ಜನರ ಅಭಿವೃದ್ಧಿಗೆ ಮೀಸಲಿಟ್ಟರು.
4.ಯಾವದೇ ಪ್ರೊಜೆಕ್ಟ ನ ವಿಫಲತೆಯನ್ನು ಹೊತ್ತುಕೊಳ್ಳಲು ಕಲಾಮ್ ರವರು ಹಿಂಜರಿಯುತ್ತಿರಲಿಲ್ಲ.
ನೀವು ಸಫಲರಾದರೆ ನೂರೆಂಟು ಹಾರ ತುರಾಯಿ... ವಿಫಲರಾದರೆ ಗೋವಿಂದನ ಪಾದದಡಿ ಸಾಯಿ -ಇದು ಜಗದ ನಿಯಮ. ಆದರೆ ಕಲಾಮ್ ರು ಹಾಗಲ್ಲ... ಯಾವದೇ ಪ್ರಯೋಗ ವಿಫಲವಾದರೆ ತಾವೇ ಸ್ವತಃ ಮುಂದೆ ನಿಂತು ಪ್ರೆಸ್ ಮೀಟ್ ನ್ನು ನಿಭಾಯಿಸುತ್ತಿದ್ದರಂತೆ. ಮತ್ತೆ ಸಫಲ ರಾದಾಗ ಅ ಸಂಭಂಧಪಟ್ಟ ವಿಜ್ನಾನಿಗಳನ್ನೇ ಮುಂದೆ ತಂದು ಮಾತನಾಡಲು ಪ್ರೆರೇಪಿಸುತ್ತಿದ್ದರಂತೆ. ಅವರ ಸಹೋದ್ಯೋಗಿಗಳು ಈಗಲೂ ಇದನ್ನು ನೆನಪಿಸಿಕೊಂಡು ಭಾವುಕರಾಗ್ತಾರೆ.
5. ನಿಜವಾದ ಬಾಸ್ ಅಂದರೆ ಹೇಗಿರಬೇಕು? ಕಲಾಮ್ ಸಹೋದ್ಯೋಗಿಗಳ ಜೊತೆ ಹೇಗಿದ್ದರು?
ಇದು ಕಲಾಮ್ ರವರು ದಿ ಆರ್ ಡಿ ಒ ದಲ್ಲಿ ಇದ್ದಾಗಿನ ಘಟನೆ. ಎಲ್ಲರಿಗೂ ಮಿಸ್ಸೈಲ್ ಪ್ರೊಜೆಕ್ಟ್ ನ ಕೆಲಸದ ಒತ್ತಡವಿತ್ತು. ಒಬ್ಬ ವಿಜ್ನಾನಿಗೆ ಸ್ವಲ್ಪ ಬೇಗನೆ (೬ ಘಂಟೆಗೆ) ಹೋಗುವ ಅನುಮತಿ ಬೇಕಾಗಿತ್ತು - ಆ ವಿಜ್ನಾನಿ ಮಕ್ಕಳಿಗೆ ಯಾವುದೋ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ಪ್ರೊಮಿಸ್ ಕೊಟ್ಟು ಬಂದಿದ್ದ. ಕಲಾಮ್ ರು ಅವನಿಗೆ ಅನುಮತಿ ಕೊಟ್ಟು 6.00 ಘಂಟೆಗೆ ಎಚ್ಚರಿಸುವದಾಗಿ ಹೇಳಿ ಕಳುಹಿಸಿದ್ದಾರೆ. 6.00 ಘಂಟೆಗೆ ಆ ವಿಜ್ನಾನಿಯ ಪ್ರಯೋಗಾಲಯಕ್ಕೆ ಕಲಾಮ್ ರು ಹೋದಾಗ ಆ ವಿಜ್ನಾನಿ ತನ್ನ ಕೆಲಸದಲ್ಲಿ ತನ್ಮಯರಾಗಿರುವದನ್ನು ಕಂಡು ವಾಪಸ್ಸಾಗ್ತಾರೆ. ಅವರೇ ಆ ವಿಜ್ನಾನಿಯ ಮನೆಗೆ ಹೋಗಿ ಅವರ ಮಕ್ಕಳನ್ನು ಆ ನಿಗದಿತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಮನೆಗೆ ಬಿಡ್ತಾರೆ.
ಆ ವಿಜ್ನಾನಿ ಗೆ ತುಂಬ ಹೊತ್ತಿನ ನಂತರ ಮಕ್ಕಳ ನೆನಪಾಗಿ ಓಡಿ ಬರ್ತಾರೆ. ಮಕ್ಕಳು ಕಾರ್ಯಕ್ರಮದ ವಿಷಯಗಳನ್ನು ಸಂತಸದಿಂದ ವಿವರಿಸುತ್ತಿದ್ದರೆ ಆವಾಕ್ಕಾಗಿ ನಿಲ್ಲುವ ಸರದಿ ವಿಜ್ನಾನಿಗಳದ್ದಾಗಿರುತ್ತದೆ.






ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ