ಭಾರತರತ್ನ ಡಾ. ಅಬ್ದುಲ್ ಕಲಾಮ್ ರವರ ಬಗ್ಗೆ ಕೆಲವು ಜನಜನಿತ ಕತೆಗಳು ಡಾ. ಕಲಾಮ್ ರ ವಿದ್ಯಾರ್ಥಿಯಾಗಿದ್ದಾಗಿನ ಭಾವಚಿತ್ರ 1. ಕಟ್ಟಡದ ರಕ್ಷಣಾತ್ಮಕ ಗೋಡೆಗೆ ಗ್ಲಾಸ್ ಹಾಕಿದ್ರೆ ಪಕ್ಷಿಗಳಿಗೆ ತೊಂದರೆಯಾಗಬಹುದು ! ಇದು ಅವರು ಡಿ ಅರ್ ಡಿ ಓ ನಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ಕಟ್ಟಡದ ರಕ್ಷಣೆಯ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದಾಗ ಕಲಾಮ ರವರು ಪಕ್ಷಿಗಳು ಗ್ಲಾಸನ್ನು ನೋಡಿ ಗೋಡೆ ಮೇಲೆ ಕುತ್ಕೊಳ್ಳೋದನ್ನೇ ಬಿಡಬಹುದು... ಅದೆಲ್ಲಾ ಬೇಡ ಬಿಡಿ ಅಂದುಬಿಟ್ಟರು ..! 2. ರಾಷ್ಟ್ರಪತಿಯಾದ ಮೇಲೆ ಕೇರಳದಲ್ಲಿ ರಾಷ್ಟ್ರಪತಿಗಳ ಅತಿಥಿಗಳಾಗಿ ಅವರು ಯಾರನ್ನು ಆಮಂತ್ರಿಸಿದ್ದರು.. ಊಹಿಸಬಲ್ಲಿರಾ? ಅದು ಅವರು ರಾಷ್ಟ್ರಪತಿಯಾದ ಮೇಲೆ ಮೊದಲಸಲ ಕೇರಳಕ್ಕೆ ಭೇಟಿ ನೀಡಿದಾಗಿನ ಘಟನೆ. ರಾಷ್ಟ್ರಪತಿಗಳು ಯಾರನ್ನು ಬೇಕಾದರೂ ಅತಿಥಿಗಳಾಗಿ ಆಮಂತ್ರಿಸಬಹುದು. ಅವರು ಆಮಂತ್ರಿಸಿದ್ದು...೧). ಒಬ್ಬ ಚಮ್ಮಾರನನ್ನು ಮತ್ತು ೨). ಒಬ್ಬ ಸಣ್ಣ ಹೋಟೆಲ್ ನ ಮಾಲೀಕನನ್ನು. ಇವರಿಬ್ಬರೂ ಹಿಂದೆ ವಿಜ್ನಾನಿಯಾಗಿ ತಿರುವನಂತಪುರಮ್ ನಲ್ಲಿ ಇದ್ದಾಗ ಪರಿಚಯವಾದ ಜನರಾಗಿದ್ದರು..! 3. ಅವರು ರಾಷ್ಟ್ರಪತಿಯಾದ ಮೇಲೆ ತಮ್ಮ ವೇತನ ಮತ್ತು ಜೀವಮಾನದ ಉಳಿತಾಯವನ್ನೆಲ್ಲ ಏನು ಮಾಡಿದರು ಗೊತ್ತೆ? ಒಂದು ಸಲ ನೀವು ರಾಷ್ಟ್ರಪತಿಗಳಾದಿರೆಂದರೆ ನಿಮ್ಮ ಎಲ್ಲ ಖರ್ಚು ವೆಚ್ಚಗಳನ್ನು (ಮಾಜಿಗಳೂ ಸೇರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು